ವಿಜಯಪುರ: ವಿಜಯಪುರದ ಸಾರಂಗ ಮಠದಲ್ಲೂ ಚಿನ್ನದ ಸೆಂಗೋಲ್ ಹೋಲುವ ಧರ್ಮದಂಡ ಇದೆ. ಹೌದು..! ನೂತನ ಸಂಸತ್ತಿನಲ್ಲಿ ಇಡಲಾಗಿರುವ ಸೆಂಗೋಲ್ ಮಾದರಿಯ ಬೆಳ್ಳಿ ಧರ್ಮದಂಡ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿರುವ ಸಾರಂಗ ಮಠದಲ್ಲಿ ಇದೆ. ಉಜ್ಜಯಿನಿ ಪೀಠಕ್ಕೆ ಸೇರಿದ ನಂದಿ ಇರುವ ಧರ್ಮದಂಡ ಇದಾಗಿದೆ. ಸಿಂದಗಿ ಸಾರಂಗ ಮಠದ ಗುರುಗಳು ಹಿಡಿಯುವ ಸಂಗೋಲ್ ಮಾದರಿಯ ಧರ್ಮದಂಡವೂ
ನ್ಯಾಯ ಮತ್ತು ಧರ್ಮ ಸಂಸ್ಕೃತಿಯನ್ನು ರಕ್ಷಿಸಲು ಬಳಕೆಯಾಗುವ ಉಜ್ಜಯಿನಿ ಪೀಠದ ಧರ್ಮದಂಡ ಆಗಿದೆ. ಅಲ್ಲದೇ, ಉಜ್ಜಯಿನಿ ಪೀಠದಿಂದ ಅನುಸರಣಾ ಪೀಠಾಧಿಪತಿಗಳಿಗೆ ನೀಡಲಾಗಿರುವ ಬೆಳ್ಳಿ ನಂದಿ ಇರುವ ಧರ್ಮದಂಡವನ್ನು ಪೀಠಾಧಿಪತಿಗಳಿಂದ ಪೀಠಾಧಿಪತಿಗಳಿಗೆ ಈ ಧರ್ಮದಂಡ ನೀಡುತ್ತಾ ಬರಲಾಗ್ತಿದೆ. ಕೆಳಗೆ ಬಿದರಿನ ದಂಡ, ಮೇಲೆ ಬೆಳ್ಳಿಯಲ್ಲಿ ಮಾಡಲಾಗಿರುವ ನಂದಿ ಮೂರ್ತಿ ಇರುವ ಬೆತ್ತ ಇದಾವಿದೆ. ಈ ಧರ್ಮದಂಡ ಹಿಡಿದು ಭಕ್ತರ ಮನೆಗಳಿಗೆ, ಧಾರ್ಮಿಕ ಕಾರ್ಯಗಳಲ್ಲಿ ಸಾರಂಗ ಮಠದ ಸ್ವಾಮೀಜಿಗಳು ಪಾಲ್ಗೊಳ್ಳುವ ಪದ್ಧತಿ ಇದೆ.