ಕಲಬುರಗಿ: ಕುಡಿಯಲು ಹಣ ಕೊಡದ ತಮ್ಮನ್ನು ಅಣ್ಣ ಹತ್ಯೆಗೈದಿರುವ ಘಟನೆ ಕಲಬುರಗಿ ಸಮೀಪದ ಪಾಳಾ ಗ್ರಾಮದಲ್ಲಿ ನಡೆದಿದೆ. ಮದ್ಯ ಸೇವನೆಗೆ ಹಣ ಕೊಡದ ಸ್ವಂತ ತಮ್ಮ ಕಲ್ಯಾಣಿ ಹಕ್ಕಿನ್ನು (25) ಅಣ್ಣ ಭೀಮಾಶಂಕರ ಹತ್ಯೆ ಮಾಡಿದ್ದಾನೆ. ಇನ್ನು ರಾತ್ರಿ ಕುಡಿಯಲು ಹಣ ಕೇಳಿದ್ದಾನೆ. ಹಣ ನೀಡಲ್ಲ ಎಂದಾಗ ಸಿಟ್ಟಿಗೆದ್ದು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದಾನೆ. ಗಾಯಗೊಂಡ ಕಲ್ಯಾಣಿಗೆ ನಗರದ ಆಸ್ಪತ್ರೆಯಲ್ಲಿ ದಾಖಲಿಸಿದರು. ಆದ್ರೆ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ವಿಶ್ವವಿದ್ಯಾಲಯ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.