ವಿಜಯಪುರ: ಚಕ್ರವರ್ತಿ ಸೂಲಿಬೆಲೆಗೆ ಸಚಿವ ಎಂ ಬಿ ಪಾಟೀಲ್ ವಾರ್ನಿಂಗ್ ನೀಡಿದ್ದಾರೆ. ವಿಜಯಪುರ ನಗರದಲ್ಲಿ ರವಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವನ್ನು ಹಿಟ್ಲರ್ ಸರ್ಕಾರಕ್ಕೆ ಸೂಲಿಬೆಲೆಗೆ ಹೋಲಿಸಿದಕ್ಕೆ ಎಂ ಬಿ ಪಾಟೀಲ್ ಕಿಡಿಕಾರಿದರು. ಹಿಂದೆ ನಾಲ್ಕು ವರ್ಷ ಸುಲಿಬೆಲೆ ಏನ್ ಮಾಡಿದ್ದಾರೆ. ನಾಲ್ಕು ವರ್ಷ ಸುಲಿಬೆಲೆ ಅನಾಹುತ ಮಾಡಿದ್ದಾರೆ. ಸುಲಿಬೆಲೆ ಮಾಡಿದ ಅನಾಹುತಗಳನ್ನ ನಾವು ಸರಿಪಡೆಸುತ್ತಿದ್ದೇವೆ ಎಂದರು. ಅಲ್ಲದೇ, ಪಠ್ಯಪುಸ್ತಕ, ಹಿಜಾಬ್, ಹಲಾಲ್, ಅಜಾನ್ ಅಂತ್ಹೇಳಿ ನಾಟಕ ಮಾಡಿದ್ದಾರೆ. ಇನ್ಮುಂದೆ ಇಂಥ ನಾಟಕ ಮಾಡಿದ್ರೆ ಜೈಲು ಕಂಬಿಗತಿ ಎಂದು ಸುಲಿಬೆಲೆಗೆ ಜೈಲಿಗೆ ಹಾಕಿಸೋ ವಾರ್ನಿಂಗ್ ನೀಡಿದರು.