ವಿಜಯಪುರ: ಆಕಸ್ಮಿಕವಾಗಿ ವಿದ್ಯುತ್ ತಂತಿಯ ವಿದ್ಯುತ್ ಸ್ಪರ್ಶಿಸಿ ಎರಡು ಎತ್ತುಗಳು ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಮಣಂಕಲಗಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ದ್ಯಾಮಗೊಂಡ ಲಕ್ಷ್ಮಣ ಏಳಗಿ ಎಂಬುವರಿಗೆ ಸೇರಿದ ಸಾವಿರಾರು ಮೌಲ್ಯದ ಎತ್ತುಗಳು ಸಾವನ್ನಪ್ಪಿವೆ. ಇನ್ನು ಕಳೆದ ರಾತ್ರಿ ಸಿಡಿಲು ಸಹಿತ ಸುರಿದ ಮಳೆ ಸಂದರ್ಭದಲ್ಲಿ ಸಿಡಿಲು ವಿದ್ಯುತ್ ಕಂಬಕ್ಕೆ ತಗುಲಿದೆ. ಈ ವೇಳೆಯಲ್ಲಿ ವಿದ್ಯುತ್ ತಂತಿಯ ಸ್ಪರ್ಶ ಎತ್ತುಗಳಿಗೆ ತಗುಲಿ ಅಸುನೀಗಿದ್ದಾವೆ. ಝಳಕಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.