ವಿಜಯಪುರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲೆಯ ಪೊಲೀಸರು ವಿಭಿನ್ನವಾಗಿ ಪರಿಸರ ದಿನಾಚರಣೆ ಆಚರಣೆ ಮಾಡಿದರು. ವಿಜಯಪುರ ನಗರದ ಆದರ್ಶನಗರ ಪೊಲೀಸ ಠಾಣಾ ಆವರಣದಲ್ಲಿ ಸಸಿ ನೆಟ್ಟು ಪರಿಸರ ಉಳಿಸಿ ಬೆಳೆಸಿ ಎಂದು ಸಂದೇಶ ನೀಡಿದರು. ಆದರ್ಶನಗರ ಪೊಲೀಸ ಠಾಣಾ ಪಿಎಸ್ಐ ಯತೀಶ್ ನೇತೃತ್ವದಲ್ಲಿ ಪೊಲೀಸ ಸಿಬ್ಬಂದಿಗಳು ಸಸಿ ನೆಟ್ಟು ಎಲ್ಲರಿಗೂ ಮಾದರಿಯಾದರು. ಅಲ್ಲದೇ, ಪ್ಲಾಸ್ಟಿಕ್ ಮುಕ್ತ ನಗರ ಹಾಗೂ ಹಸಿರು ಪರಿಸರಕ್ಕೆ ಜನತೆ ಸಾತ್ ನೀಡಬೇಕು. ಮುಂದಿನ ಪೀಳಿಗೆಗೆ ಪರಿಸರ ಉಳಿಸಬೇಕಾಗಿದೆ. ಅದಕ್ಕಾಗಿ ಪರಿಸರ ಕಾಪಾಡಲು ಜನತೆ ಸಾತ್ ನೀಡಬೇಕು ಎಂದು ಪಿಎಸ್ಐ ಯತೀಶ್ ಸಂದೇಶ ರವಾನಿಸಿದರು.