ವಿಜಯಪುರ: ವಿಜಯಪುರದ ರೌಡಿಶೀಟರ್ ಹೈದರ್ ಅಲಿ ಹತ್ಯೆಯ ಪ್ರತಿಕಾರಕ್ಕಾಗಿ ಹಂತಕರನ್ನು ಕೊಲ್ಲುತ್ತೇನೆ ಎಂದು ಹತ್ಯೆಯಾಗಿರುವ ರೌಡಿಶೀಟರ್ ಹೈದರ್ ಅಲಿ ಗೆಳೆಯ ಗುಂಡೂ ಹೇಳಿಕೆ ವಿಜಯಪುರದ ಸೋಷಿಯಲ್ ಮೀಡಿಯಾದ ವೈರಲ್ ಆಗಿದೆ. ರೌಡಿ ಶೀಟರ್ ಹೈದರ್ ಹತ್ಯೆ ಮಾಡಿದವರನ್ನು ಕೋರ್ಟ್ನಲ್ಲಿ ಹೊಡೆಯುವುದಾಗಿ ಹೈದರ್ ಖಾಸಾ ಗೆಳೆಯ ಗುಂಡೂ ಶಪತ ಮಾಡಿರುವ ವಿಡಿಯೋ ವೈರಲ್ ಆಗಿದೆ. ಅದಕ್ಕಾಗಿ ಕ್ರೈಂ ನಡೆಯುವ ಮುನ್ನವೇ ಎಚ್ಚೆತ್ತುಕೊಂಡು ಪೊಲೀಸರು ಕಾರ್ಯಾಚರಣೆ ನಡೆಸಿ ಗುಂಡೂನ್ನು ಬಂಧಿಸಿದ್ದಾರೆ. ವಿಜಯಪುರ ನಗರ ಉಪ ವಿಭಾಗದ ಪೊಲೀಸರಿಂದ ಕಾರ್ಯಾಚರಣೆ ನಡೆಸಿ ಲಾಕ್ ಮಾಡಿದ್ದಾರೆ. ಹೈದರ್ ಹತ್ಯೆ ಮಾಡಿದ ಶೇಖ್ ಮೋದಿ, ಎಸ್ ಎಸ್ ಖಾದ್ರಿ ಸೇರಿ 4 ಆರೋಪಿಗಳನ್ನ ಕೋರ್ಟ್ ಆವರಣದಲ್ಲೆ ಮುಗಿಸಲು ಸ್ಕೆಚ್ ಹಾಕಿದ್ದ ಗುಂಡೂನ್ನು ಅಂದರ್ ಮಾಡಲಾಗಿದೆ.