ವಿಜಯಪುರ: ವಿಜಯಪುರ ಶಿಕ್ಷಣ ಇಲಾಖೆಯಲ್ಲಿ ಕುರ್ಚಿಗಾಗಿ ಇಬ್ಬರ ಮಧ್ಯೆ ಕಿತ್ತಾಟ ಆಗಿರುವ ಘಟನೆ ವಿಜಯಪುರ ನಗರದ ಡಿಡಿಪಿಐ ಕಚೇರಿಯಲ್ಲಿ ಗುರುವಾರ ನಡೆದಿದೆ. ಡಿಡಿಪಿಐ ಹುದ್ದೆಗಾಗಿ ಉಮೇಶ ಶಿರಹಟ್ಟಿಮಠ ಹಾಗೂ ಯುವರಾಜ ನಾಯಕ್ ಮದ್ಯೆ ಕುರ್ಚಿಗಾಗಿ ಕಿತ್ತಾಟ ಆಗಿದೆ. ಪ್ರಸಕ್ತ ಉಮೇಶ ಅವರಿಗೆ ಡಿಡಿಪಿಐಯಿಂದ ಜೆಡಿ ಆಗಿ ಮುಂಬಡ್ತಿ ಸಿಕ್ಕಿದೆ. ಆದ್ರೆ, ಪ್ತಸಕ್ತ ಜಾಗದಲ್ಲೇ ಜೂನ್ 30ರವರೆಗೆ ಮುಂದುವರೆಯುತ್ತೇನೆ ಎಂದು ಡಿಡಿಪಿಐ ಉಮೇಶ ಮಾಹಿತಿ ನೀಡಿದ್ದಾರೆ. ಆದ್ರೇ, ಕೂಡ್ಲಿಗಿ ಬಿಇಓ ಯುವರಾಜ್ ನಾಯಕ ಅವರಿಗೆ ವಿಜಯಪುರ ಡಿಡಿಪಿಐ ಆಗಿ ಮುಂಬಡ್ತಿ ನೀಡಿ ಸರ್ಕಾರ ಆದೇಶ ನೀಡಿದೆ. ಅದಕ್ಕಾಗಿ ಬೆಂಬಲಿಗರೊಂದಿಗೆ ಅಧಿಕಾರ ಸ್ವೀಕಾರ ಮಾಡಲು ಯುವರಾಜ್ ನಾಯಕ್ ಬಂದಿದ್ದರು. ಇಬ್ಬರು ಅಧಿಕಾರಿಗಳ ಮಧ್ಯೆ ಗೊಂದಲ ಸೃಷ್ಟಿ ಹಿನ್ನಲೆ ಡಿಡಿಪಿಐ ಕಚೇರಿಯಲ್ಲಿ ಯಾರು ಡಿಡಿಪಿಐ ಎನ್ನುವ ಗೊಂದಲ ಸೃಷ್ಟಿ ಆಗಿದೆ. ಡಿಡಿಪಿಐ ನಿರ್ಧಾರವನ್ನು ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕು ಎಂದು ಯುವರಾಜ ನಾಯಕ್ ಹೇಳಿದರು.