ವಿಜಯಪುರ: ಸರ್ಕಾರಿ ಜಾಗದಲ್ಲಿ ಅಂಗಡಿ ಹಾಕಿಕೊಂಡವರ ಮೇಲೆ ಕಾಂಗ್ರೆಸ್ ಮುಖಂಡ ಹಾಗೂ ಬೆಂಬಲಿಗರು ದೌರ್ಜನ್ಯ ನಡೆಸಿರುವ ಆರೋಪ ಕೇಳಿಬಂದಿದೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ ಬಾಪುಗೌಡ ಪಾಟೀಲ್ ಕಾಂಗ್ರೆಸ್ ಹಾಗೂ ಬೆಂಬಲಿಗರು ಮಲ್ಲಿಕಾರ್ಜುನ ಬಾಟಗಿ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಬಾಟಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೇ, ಸರ್ಕಾರಿ ಜಾಗದ ಬಳಿ ಎರಡು ಎಕರೆ ಜಮೀನನ್ನು ಬಾಪುಗೌಡ ಪಾಟೀಲ್ ಖರೀದಿ ಮಾಡಿದ್ದಾರೆ. ಆದ್ರೇ, ಸರ್ಕಾರಿ ಜಾಗದಲ್ಲಿ ನೂರಾರು ಅಂಗಡಿ ಹಾಕಿಕೊಂಡು ಸ್ಥಳೀಯರು ಉಪಜೀವನ ಮಾಡುತ್ತಿದ್ದಾರೆ. ಆದ್ರೆ, ಬಾಪುಗೌಡ ಪಾಟೀಲ್ ಮೊದಲಿಗೆ ಮಲ್ಲಿಕಾರ್ಜುನ ಬಾಟಗಿ ಟಾರ್ಗೆಟ್ ಮಾಡಿ ಅಂಗಡಿ ಕಿತ್ತು ಹಾಕಿದ್ದಾರೆ ಎಂದು ಹೇಳಲಾಗಿದೆ. ಇನ್ನು ಮಲ್ಲಿಕಾರ್ಜುನ ಬಾಟಗಿ ಪತ್ನಿ ಶಾಂತಮ್ಮ , ಮಕ್ಕಳಾದ ಕಾವೇರಿ ಚೆನ್ನಮ್ಮ, ವಿಶ್ವನಾಥ್ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ. ಹಲ್ಲೆಯ ವಿಡಿಯೋ ಸೆರೆ ಹಿಡಿಯುವಾಗ ಬಾಪುಗೌಡ ಪಾಟೀಲ್ ಬೆಂಬಲಿಗರು ಮೊಬೈಲ್ ಕಿತ್ತುಕೊಂಡಿದ್ದಾರೆ.
ಬಬಲೇಶ್ವರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.