K1N ಡೆಸ್ಕ್: ಸಿಎಂ ಸಾರ್ ಮದ್ಯದ ರೇಟ್ ಏರಿಕೆ ಮಾಡಬೇಡಿ, ಮದ್ಯದ ರೇಟ್ ಹೆಚ್ಚಾದ್ರೆ ಬಡವರಿಗೇ ಹೊರೆ ಆಗುತ್ತದೆ. ಅದಕ್ಕಾಗಿ ಸುಂಕವನ್ನು ಕಡಿಮೆ ಮಾಡಿ ಮದ್ಯಪ್ರಿಯರ ಆರ್ಥಿಕ ಹೊರೆ ಇಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಮತ್ತು ಅಬಕಾರಿ ಸಚಿವರಿಗೆ ಮದ್ಯಪ್ರಿಯನೋರ್ವ ಪತ್ರ ಬರೆದು ಮದ್ಯಕ್ಕಾಗಿ ಮನವಿ ಮಾಡಿಕೊಂಡಿದ್ದಾನೆ. ಇನ್ನು ಬಡವರ ಬ್ರಾಂಡಿನ ಮದ್ಯದ ಸುಂಕ ಕಡಿಮೆ ಮಾಡಿ, ರಾಜ್ಯದಲ್ಲಿ ಎಲ್ಲಾ ವರ್ಗದವರೂ ಮದ್ಯಪಾನ ಮಾಡುತ್ತಾರೆ. ಆಹಾರ ಸಂಸ್ಕೃತಿ ಭಾಗವಾಗಿ ಮದ್ಯ ಸೇವನೆ ಮಾಡ್ತಿದ್ದಾರೆ. ಮದುವೆ, ಹಬ್ಬ, ಆರಾಧನೆ, ಸಂತೋಷ ಕೂಟದಲ್ಲಿ ಮದ್ಯ ಸೇವನೆ ಮಾಡುತ್ತಾರೆ. ಸರ್ಕಾರಕ್ಕೆ ಇದರಿಂದ ಸಾವಿರಾರು ಕೋಟಿ ಆದಾಯ ಬರುತ್ತದೆ. ಇಷ್ಟು ಆದಾಯ ಬರುತ್ರಿದ್ದರೂ ಮದ್ಯ ಪ್ರೇಮಿಗಳ ಬಗ್ಗೆ ಕಾಳಜಿ ವಹಿಸಿಲ್ಲ. ಹೀಗಾಗಿ ಮದ್ಯದ ರೇಟ್ ಹೆಚ್ಚಳ ಮಾಡಬಾರದು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.