ವಿಜಯಪುರ: ಕೊಟ್ಟ ಮಾತಿನಂತೆ ಕಾಂಗ್ರೆಸ್ ಸರ್ಕಾರ ನಡೆದುಕೊಂಡಿದೆ ಎಂದು ಸಚಿವ ಎಂಬಿ ಪಾಟೀಲ ಹೇಳಿದರು. ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿ ರವಿವಾರ ಮಾತನಾಡಿದರು. ಅಲ್ಲದೇ, ಉಳಿದ ಯೋಜನೆಗಳು ಕೆಲವೆ ದಿನಗಳಲ್ಲಿ ಜಾರಿಯಾಗಲಿವೆ. ಕ್ಯಾಬಿನೆಟ್ ನಲ್ಲಿ ಮಂಜೂರಾಗಿವೆ. ಆದಷ್ಟು ಬೇಗನೆ ಜಾರಿ ಮಾಡುತ್ತೇವೆ.
ಮಹಿಳೆಯರಿಗೆ ಸಮಾನ ಹಕ್ಕು ಸಿಗಬೇಕು ಎಂದು ಬಸವಣ್ಣನವರು ಬಯಸಿದ್ದರು. ಬಸವಣ್ಣನವರ ಆಶಯದಂತೆ ಸಿದ್ದರಾಮಯ್ಯ ಯೋಜನೆ ಜಾರಿ ಮಾಡಿದ್ದಾರೆ ಎಂದರು. ಅಲ್ಲದೇ, ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹೆಸರು ಇಡುತ್ತೇವೆ.
ಇಷ್ಟರಲ್ಲೆ ಪ್ರಸ್ತಾವಣೆ ನೀಡಿ ಅನುಮೋದನೆ ಪಡೆಯುತ್ತೇವೆ ಎಂದರು.