ವಿಜಯಪುರ: ನಾನು ಚಿಲ್ಲರೆ ರಾಜಕಾರಣ ಮಾಡಲ್ಲ ಎಂದು ವಿಜಯಪುರದಲ್ಲಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಹೇಳಿದರು. ಶಾಸಕ ಯತ್ನಾಳ ದುರುದ್ದೇಶದಿಂದ ಮೇಲಿಂದ ಮೇಲೆ ಮಾತನಾಡೋದು ಸರಿಯಲ್ಲ. ನಾನು ಪಕ್ಷಕ್ಕೆ ಅಂಟಿಕೊಂಡು ರಾಜಕಾರಣ ಮಾಡಿದವ ನಾನಲ್ಲ. ಯತ್ನಾಳ್ ಸ್ವ ಪ್ರೇರಣೆಯಿಂದ ಮಾತನಾಡ್ತಿಲ್ಲ. ಯಾರೋ ಅವರಿಗೆ ಪ್ರೋ ಓಕ್ ಮಾಡ್ತಿದ್ದಾರೆ ಎಂದರು.
ಇನ್ನು ನಾನು ವಿಜಯಪುರ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧನಾಗಿದ್ದೇನೆ. ಬಿಜೆಪಿ, ಅಥವಾ ಕಾಂಗ್ರೆಸ್ ನಿಂದ ಸ್ಪರ್ಧೆಗೂ ಸಿದ್ಧ. ನಾನು ಗೆಲ್ತಿನೋ ಅವ್ರು ಗೆಲ್ಲುತ್ತಾರೆ ಎನ್ನುವುದು ಜನ ತೀರ್ಮಾನ ಮಾಡಿದ್ಮೇಲೇ ಮಾತನಾಡೋದು ಒಳ್ಳೆಯದು ಎಂದು ಕಿಡಿಕಾರಿದರು. ಅಲ್ಲದೇ, ಈವರೆಗೆ ನಾನು ಅವರ ಉಸಾಬರಿ ಮಾಡಿಲ್ಲ ಎಂದರು.
ಶಾಸಕ ಶಿವಾನಂದ ಪಾಟೀಲಗೆ ಬ್ಲ್ಯಾಕ್ ಮೇಲ ಮಾಡುವ ಚಟ ಇದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಗುಡುಗಿದರು. ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ಸ್ಪರ್ಧೆ ಮಾಡ್ತೀನಿ ನಾನು. ಅವನೇನು ಕೇಳಬೇಕು ನಾನು ಎಂದರು. ಅಲ್ಲದೇ, ಅವನಿಗೆ ಬ್ಲ್ಯಾಕ್ಮೇಲ್ ಮಾಡುವ ಚಟ ಇದೆ. ಎಂಬಿ ಪಾಟೀಲ್ ಗೆ ಬ್ಲ್ಯಾಕ್ಮೇಲ್ ಮಾಡಿದಂಗೆ ನನಗೆ ಮಾಡೋಕೆ ಆಗಲ್ಲ ಎಂದರು.