ವಿಜಯಪುರ: ವಿಜಯಪುರದಲ್ಲಿ ಟಿಕೆಟ್ ವಿತರಿಸಲು ಕಂಡಕ್ಟರ್ ಹರಸಾಹಸ ಪಟ್ಟಿದ್ದಾರೆ. ಕಂಡಕ್ಟರ್ ಚೀಟಿ ಕೊಡಲಾಗದೆ ಸೀಟು ಹತ್ತಿ ಕುಳಿತಿದ್ದು, ಕಂಡಕ್ಟರ್ ಪಡಿಪಾಟಲಿನ ವಿಡಿಯೋ ಫುಲ್ ವೈರಲ್ ಆಗಿದೆ. KSRTC ಬಸ್ಸುಗಳಲ್ಲಿ ಈಗ ಮಹಿಳೆಯರದ್ದೇ ದರ್ಬಾರ್ ಆಗಿದೆ. ಕಂಡಕ್ಟರ್ ಸೀಟುಗಳ ಮೇಲೆ ಹತ್ತಿ ಕುಳಿತು ಟಿಕೆಟ್ ವಿತರಿಸಿರುವ ಘಟನೆ ವಿಜಯಪುರದ ಬಸವನಬಾಗೇವಾಡಿ ತಾಲೂಕಿನಲ್ಲಿ ನಡೆದಿದೆ. ಕಂಡಕ್ಟರ್ ಟಿಕೆಟ್ ನೀಡಲು ಹರಸಾಹಸ ಪಟ್ಟ ವಿಡಿಯೋ ವೈರಲ್ ಆಗಿದೆ. ಶಕ್ತಿ ಯೋಜನೆಯ ಯಶಸ್ಸಿಗೆ ಈ ದೃಶ್ಯವೇ ಸಾಕ್ಷಿಯಾಗಿದೆ.