ವಿಜಯಪುರ: ರೌಡಿಶೀಟರ್ ಮಹಾದೇವ ಬೈರಗೊಂಡ ಗ್ಯಾಂಗ್ ಮೇಲೆ ಗುಂಡಿನ ದಾಳಿ ಪ್ರಕರಣದಲ್ಲಿ ಪ್ರಮುಖ ಆರೋಪಿ ಮಡುಸ್ವಾಮಿ ಹಿರೇಮಠಗೆ ಜಾಮೀನು ಮಂಜೂರು ಹಿನ್ನೆಲೆ ವಿಜಯಪುರ ನಗರದ ಅಮೋಘಸಿದ್ಧೇಶ್ವರ ದೇವಸ್ಥಾನದ ಎದುರು ತೆಂಗಿನಕಾಯಿ ಒಡೆದು ರೌಡಿಶೀಟರ್ ಮಡುಸ್ವಾಮಿ ಬೆಂಬಲಿಗರು ಸಂಭ್ರಮಿಸಿದರು. ಜೈಲಿಂದ ಹೊರಬಂದ ರೌಡಿಶೀಟರ್ ಮಡುಸ್ವಾಮಿಗೆ ಕೋರ್ಟ್ ಶರತ್ತು ವಿಧಿಸಿ ಜಾಮೀನು ನೀಡಿದೆ. ಕಳೆದ 2020ರ ನವೆಂಬರ್ 2 ರಂದು ಮಹಾದೇವ ಬೈರಗೊಂಡ ಮೇಲೆ ಕನ್ನಾಳ ಕ್ರಾಸ್ ಬಳಿ ಫೈರಿಂಗ್ ನಡೆದಿತ್ತು. ಈ ಗ್ಯಾಂಗ್ ವಾರ್ನಲ್ಲಿ ಮಹಾದೇವ ಬೈರಗೊಂಡ ಕಾರ್ ಡ್ರೈವರ್ ಲಕ್ಷ್ಮಣ ದಿಂಡೋರೆ, ಮ್ಯಾನೇಜರ್ ಬಾಬುರಾಯ್ ಕಂಚನಾಳಕರ್ ಸಾವನ್ನಪ್ಪಿದ್ದರು. ಈ ಸಂಬಂಧ ಚಡಚಣ ಗ್ಯಾಂಗಿನ 40 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಇದೀಗ್ ಬಿಡುಗಡೆ ಹಿನ್ನೆಲೆ ಸಂಭ್ರಮಿಸಿದ್ದಾರೆ.