ವಿಜಯಪುರ: ದ್ರಾಕ್ಷಿ ಕಣಜವೆಂದು ಹೆಸರುವಾಸಿಯಾಗಿರುವ ವಿಜಯಪುರ ಜಿಲ್ಲೆಯಲ್ಲಿ ಒಣದ್ರಾಕ್ಷಿ ಬೆಳೆ ಬೆಲೆ ಏಕಾಏಕಿ ಕುಸಿತಕೊಂಡಿದೆ.
ಕೆ.ಜಿಗೆ 150-180 ರೂ. ಮಾರಾಟವಾಗುತ್ತಿದ್ದ ದ್ರಾಕ್ಷಿ ಈ ಬಾರಿ 80-110 ಕೆಜಿಗೆ ಒಣದ್ರಾಕ್ಷಿ ಮಾರಾಟವಾಗುತ್ತಿದೆ.
ಸದ್ಯ ಶೀತಲ ಗೃಹದಲ್ಲಿ ಸಂಗ್ರಹವಿಟ್ಟ ಒಣದ್ರಾಕ್ಷಿ ವಾಪಸ್ ಪಡೆಯಲು ಹಣ ಕಟ್ಟಲು ಆಗುತ್ತಿಲ್ಲ. ಇದರಿಂದ ದ್ರಾಕ್ಚಿ ಬೆಳೆಗಾರರು ಕಂಗಾಲಾಗಿದ್ದಾರೆ. ರಾಜ್ಯದಲ್ಲಿ36.371 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾ ಗುತ್ತಿದೆ. ವಿಜಯಪುರ ಜಿಲ್ಲೆಯಲ್ಲಿಯೇ 25.575 ಹೆಕ್ಟರ್ ಪ್ರದೇಶದಲ್ಲಿಯೇ ದ್ರಾಕ್ಷಿ ಬೆಳೆಯಲಾಗುತ್ತಿದೆ. ಶೇ. 70.32ರಷ್ಟು ದ್ರಾಕ್ಚಿ ವಿಜಯಪುರದಲ್ಲಿಯೇ ಬೆಳೆಯಲಾಗುತ್ತಿದೆ. ಪ್ರತಿ ವರ್ಷ ಒಣದ್ರಾಕ್ಷಿ ಬೆಳೆಗಾರರಿಗೆ ಲಾಭ ತಂದುಕೊಡುತ್ತಿತ್ತು. ಆದರೆ ಈ ವರ್ಷ ಬೆಲೆ ಕುಸಿತ ಕಂಡಿರುವ ಕಾರಣ ದ್ರಾಕ್ಷಿ ಬೆಳೆಗಾರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ದ್ರಾಕ್ಷಿ ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಶಾಲೆಯಲ್ಲಿ ನೀಡುವ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಒಣದ್ರಾಕ್ಷಿ ಸೇರಿಸಿ ವಾರಕ್ಕೆ ಒಂದು ದಿನವಾದರೂ ಮಕ್ಕಳಿಗೆ ಕನಿಷ್ಟ 50ಗ್ರಾಂ ಒಣದ್ರಾಕ್ಷಿ ಸವಿಯಲು ಅವಕಾಶ ನೀಡಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ದ್ರಾಕ್ಚಿ ಬೆಳೆಗಾರರ ನೆರವಿಗೆ ಬರಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಈ ಸಂಬಂಧ ಶೀಘ್ರ ಸಿಎಂ ಭೇಟಿಗೆ ನಿಯೋಗ ತೆರಳಿ ಮನವಿ ಸಲ್ಲಿಸಲು ನಿರ್ಧಾರ ಕೈಗೊಳ್ಳಲಾಯಿತು.