ವಿಜಯಪುರ: ಜನರು ಮಳೆಗಾಗಿ ನಾನಾ ಪ್ರಯತ್ನಗಳಲ್ಲಿ ತೊಡಗಿದ್ದಾರೆ. ಮಳೆಗಾಗಿ ವಿಜಯಪುರ ಜಿಲ್ಲೆಯಲ್ಲಿ ವಿಚಿತ್ರ ಆಚರಣೆಯೊಂದು ನಡೆದಿದೆ. ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ರೈತರು ಹಾಗು ಗ್ರಾಮಸ್ಥರು ಮಳೆಗಾಗಿ ಸ್ಮಶಾನದಲ್ಲಿಯ ಗೋರಿಗೆ ನೀರುಣಿಸುವ ಮೂಲಕ ಮಳೆಗಾಗಿ ಮೊರೆ ಇಟ್ಟಿದ್ದಾರೆ. ಟ್ಯಾಂಕರ್ ಮೂಲಕ ಗೋರಿಗೆ ನೀರು ಬಿಟ್ಟು ಶವಗಳ ಬಾಯಿಗೆ ತಲುಪಿಸಿದ್ದಾರೆ. ಶವಗಳ ಬಾಯಿಗೆ ನೀರು ಹಾಕಿದ್ರೆ ಮಳೆಯಾಗುತ್ತೆ ಎನ್ನುವ ನಂಬಿಕೆ ಗಾಢವಾಗಿದೆ. ಗ್ರಾಮದ ವಾಗೀಶ್ ಹಿರೇಮಠ ನೇತೃತ್ವದಲ್ಲಿ ವಿಚಿತ್ರ ಆಚರಣೆ ನಡೆದಿದೆ. ಇದೆ ವೇಳೆ ಗೋರಿಯ ಮೇಲೆ ಕುಳಿತು ಸಹ ಮಳೆಗಾಗಿ ಪ್ರಾರ್ಥನೆ ನಡೆದಿದೆ.