ವಿಜಯಪುರ: ಕೆರೆಯಲ್ಲಿ ಮೀನು ಹಿಡಿಯಲು ಹೋದಾಗ ತೆಪ್ಪ ಮಗುಚಿ ಯುವಕ ನೀರು ಪಾಲಗಿರುವ ಘಟನೆ
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ತಾರನಾಳ ಕೆರೆಯಲ್ಲಿ ನಡೆದಿದೆ. 17 ವರ್ಷದ ಮಂಜುನಾಥ ಶಿವಪ್ಪ ಚಲವಾದಿ ನೀರುಪಾಲಾಗಿದ್ದಾನೆ. ಯುವಕರಿಬ್ಬರು ಮೀನು ತಿನ್ನುವ ಆಸೆಯಿಂದ ಮನೆಯವರಿಗೆ ತಿಳಿಸದೆ ಕೆರೆಯಲ್ಲಿ ಬಲೆ ಹಾಕಿ ಮೀನು ಹಿಡಿಯಲುಹೋಗಿದ್ದರು. ಆಗ ತೆಪ್ಪ ಮಗುಚಿ ಯುವಕರು ಮುಳುಗುತ್ತಿದ್ದರು. ಇದನ್ನು ಗಮನಿಸಿದ ದಾರಿಹೋಕರು ಓರ್ವನನ್ನು ರಕ್ಷಿಸಿದ್ದರು.
ರಕ್ಷಿಸಲ್ಪಟ್ಟ ಯುವಕ ಭಯದ ಭೀತಿಯಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ.
ವಿಷಯ ತಿಳಿದು ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕತ್ತಲೆಯಲ್ಲೇ ಕಾರ್ಯಾಚರಣೆ ನಡೆಸಿದರೂ ಶವ ಪತ್ತೆ ಆಗಿರಲ್ಲ. ಸೋಮವಾರ ಬೆಳಿಗ್ಗೆಯೂ ಮತ್ತೇ ಕಾರ್ಯಾಚರಣೆ ಪ್ರಾರಂಭಗೊಂಡಿತ್ತಾದರು. ಅಗ್ನಿಶಾಮಕ ದಳದ ಸಿಬ್ಬಂದಿ ತಮ್ಮಲ್ಲಿರುವ ಸೀಮಿತ ಸಂಪನ್ಮೂಲ, ಉಪಕರಣ ಬಳಸಿ ಶವ ಹೊರತೆಗೆಯುವ ಕಾರ್ಯಾಚರಣೆಗೆ ಮುಂದಾಗಿದ್ದರು. ಕೊನೆಗೆ ಗ್ರಾಮದ ಯುವಕರು ಧೈರ್ಯ ಮಾಡಿ ಕೆರೆಗಿಳಿದಾಗ ಶವ ಸಿಕ್ಕಿದೆ. ಮುದ್ದೇಬಿಹಾಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.