ವಿಜಯಪುರ: ರೇಷ್ಮೆ ಗೂಡಿನ ದರ ಕುಸಿತ ಖಂಡಿಸಿ ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ರೇಷ್ಮೆ ಗೂಡಿನ ದರ ಕುಸಿತ ಖಂಡಿಸಿ ರೇಷ್ಮೆ ಬೆಳೆಗಾರರು ಶುಕ್ರವಾರ ಪ್ರತಿಭಟನೆ ನಡೆಸಿದರು. ಜಿಲ್ಲೆಯಲ್ಲಿ 2100 ಎಕರೆ ಪ್ರದೇಶದಲ್ಲಿ ಹಿಪ್ಪುನೇರಳೆ ಕೃಷಿಯಲ್ಲಿ 1228 ಜನರು ರೇಷ್ಮೆ ವ್ಯವಸಾಯ ಮಾಡುತ್ತಿದ್ದಾರೆ. ಇದರಿಂದ 20 ಮೆಟ್ರಿಕ್ ಟನ್ ಗೂಡು ಬೆಳೆದಿದ್ದೇವೆ. ಆದ್ರೇ , ಪ್ರತಿ ಕೆಜಿಗೆ 250 ರಿಂದ 300 ರೂಪಾಯಿ ಮಾತ್ರಕ್ಕೆ ಮಾರಾಟ ಆಗುತ್ತಿದೆ. ಅಲ್ಲದೇ, ಕೂಲಿಗಾರರ ದರವೂ ಏರಿಕೆ ಆಗಿದೆ. ಅದಕ್ಕಾಗಿ ಸಿಎಸ್ಆರ್ ಹೈಬ್ರೀಡ್ ಗೂಡಿಗೆ 700 ನೀಡಬೇಕು. ಅಥವಾ ರೇಷ್ಮೆ ಪ್ರತಿ ಕೆಜಿಗೆ 250 ರೂಪಾಯಿ ಜೊತೆಗೆ ಪ್ರೋತ್ಸಾಹ ಧನ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.