ವಿಜಯಪುರ: ವಿಜಯಪುರ ತಾಲ್ಲೂಕಿನ ಐನಾಪುರ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುರುವಾರ ಭೂಕಂಪನ ಆಗಿದೆ. ಐನಾಪುರ ಗ್ರಾಮದ ಸುತ್ತಮುತ್ತ ಕೂಡ ಭೂಮಿ ಕಂಪಿಸಿದ ಅನುಭವ ತಡರಾತ್ರಿ 1:38 ಭೂಕಂಪನ ಆಗಿದೆ. ಇನ್ನೂ ಭೂಕಂಪನ ರಿಕ್ಟರ್ ಮಾಪಕದಲ್ಲಿ 3.4 ರಷ್ಟು ಪ್ರಮಾಣ ದಾಖಲಾಗಿದೆ ಎಂದು KSNDMC ಅವರು ದೃಢಪಡಿಸಿದ್ದಾರೆ. ಕಳೆದೆರಡು ವರ್ಷಗಳಿಂದ ವಿಜಯಪುರ ಜಿಲ್ಲೆಯಲ್ಲಿ ಹಲವಾರು ಬಾರಿ ಭೂಮಿ ಕಂಪಿಸಿದೆ.