ವಿಜಯಪುರ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಆದರ್ಶ ಐ.ಟಿ.ಐ. ಶಿವಣಗಿ ಇವರ ಸಹಯೋಗದಲ್ಲಿ ಜುಲೈ 13 ರಂದು ಬೆಳಿಗ್ಗೆ 9.30 ಗಂಟೆಯಿಂದ ಸಂಜೆ 4-00 ಗಂಟೆಯವರೆಗೆ ಆದರ್ಶ ಐ.ಟಿ.ಐ. ಕಾಲೇಜು, ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂದುಗಡೆ ಶಿವಣಗಿ ಕಾಲೇಜ್ ಆವರಣದಲ್ಲಿ, ಖಾಸಗಿ ಕಂಪನಿಯಾದ ವೈ.ಜಿ. ಕಟಿಂಗ್ ಟೂಲ್ ಪ್ರೈ.ಲಿ., ಬೆಂಗಳೂರು ಇವರಿಂದ ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದೆ. ಈ ನೇರ ಸಂದರ್ಶನದಲ್ಲಿ ಐ.ಟಿ.ಐ. ಪಾಸಾದಂತಹ,. 28 ವಯಸ್ಸಿನೊಳಗಿನ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ತಮ್ಮ ಶಾಲಾ ದಾಖಲಾತಿ, ಎರಡು ಫೋಟೋ ಮತ್ತು ಆಧಾರ ಕಾರ್ಡನೊಂದಿಗೆ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಖುದ್ದಾಗಿ ಕಛೇರಿಗೆ ಅಥವಾ ಫೋನ್ ಮುಖಾಂತರ 9980442723 / 8867848581 / 9945000793 ಸಂಪರ್ಕಿಸಲು ಉದ್ಯೋಗಾಧಿಕಾರಿಗಳು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ವಿಜಯಪುರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.