ವಿಜಯಪುರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ವಿಜಯಪುರ ನಗರದಲ್ಲಿ ಸಚಿವ ಎಂ ಬಿ ಪಾಟೀಲ್ ವಾಗ್ದಾಳಿ ನಡೆಸಿದರು. ನಗರದಲ್ಲಿ ಶನಿವಾರ ಮಾಧ್ಯಮದ ಎದುರು ಮಾತನಾಡಿದ ಅವರು, ಜೋಶಿ ಅವರು ಹೊಟ್ಟೆ ಉರಿಯಿಂದ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಮಾತನಾಡಬಾರದು. ಜೋಶಿ ಕೇಂದ್ರ ಸಚಿವರು, ಬಹಳ ತಿಳಿದುಕೊಂಡವರು ಹೀಗೆ ಮಾತನಾಡಬಾರದು. ಜೋಶಿಯವರಿಗೆ ಬಡವರ ಬಗ್ಗೆ ಗೊತ್ತಿಲ್ಲ ಲೇವಡಿ ಮಾಡಿದರು. ಇನ್ನು ಭಾಗ್ಯಗಳನ್ನ ನಾವು ಶ್ರೀಮಂತರಿಗೆ ಕೊಡ್ತಿಲ್ಲ. ಅನ್ನಭಾಗ್ಯ, ಬಸ್ ಪಾಸ್, 200 ಯುನಿಟ್ ವಿದ್ಯುತ್, ಯುವನಿಧಿ ಏನು ಶ್ರೀಮಂತರಿಗಾ ಎಂದು ಸಚಿವ ಎಂಬಿ ಪಾಟೀಲ್ ಜೋಶಿಗೆ ಪ್ರಶ್ನಿಸಿದರು. ಅಲ್ಲದೇ, ಬಿಜೆಪಿ ವಿರೋಧ ಪಕ್ಷದ ನಾಯಕ ಆಯ್ಕೆಯಾಗದ ವಿಚಾರಕ್ಕೆ ಪಾಟೀಲ ಟಿಂಗಲ್ ಮಾಡಿದ್ದು, ವಿರೋಧ ಪಕ್ಷ ನಾಯಕನ ಸ್ಥಾನ ಸೇಲ್ ಗೆ ಇಟ್ಟಿದ್ದಾರಾ ನೋಡಿ ಎಂದರು. ಸಿಎಂ ಸ್ಥಾನ ಸೇಲ್ ಗೆ ಇಟ್ಟ ಹಾಗೆ ಬಿಜೆಪಿ ವಿರೋಧ ಪಕ್ಷದ ನಾಯಕನ ಸ್ಥಾನ ಮಾರಾಟಕ್ಕೆ ಇಟ್ಟಿರಾ? ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ನೂರಾರು ಕೋಟಿ ಫಿಕ್ಸ್ ಮಾಡಿದ್ದಾರಾ ಯಾರಿಗ್ ಗೊತ್ತು ಎಂದು ಬಿಜೆಪಿ ವರಿಷ್ಠರನ್ನ ಕುಟುಕಿದರು.