ವಿಜಯಪುರ: ಶಕ್ತಿ ಯೋಜನೆ ಜಾರಿಗೆ ಹಿನ್ನೆಲೆ ರಾಜ್ಯಾದ್ಯಂತ ಕಳ್ಳ ಪೊಲೀಸ ಚದುರಂಗ ಆಟ ಆರಂಭ ಆಗಿದೆ ಎಂದು ಆರೋಪಗಳು ಕೇಳಿ ಬರುತ್ತಿವೆ. ಹೌದು..! ಗುಮ್ಮಟನಗರಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಬರೋಬ್ಬರಿ 1.30 ಲಕ್ಷದ ಚಿನ್ನ ಕಳ್ಳತನ ಆಗಿದೆ. ಈ ಬಗ್ಗೆ ಗಾಂಧಿಚೌಕ್ ಪೊಲೀಸ ಠಾಣೆಯಲ್ಲೂ ಕೇಸ್ ದಾಖಲು ಮಾಡಲಾಗಿದೆ. ಆದ್ರೇ, ಇದರ ಹಿಂದೆ ಆ ಪೊಲೀಸ ಅಧಿಕಾರಿಯ ಸಾತ್, ಆ ಕಳ್ಳರ ಕೈವಾಡ ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೇ, ಆ ಪೊಲೀಸ ಅಧಿಕಾರಿಯೇ ಎದುರು ಆ ಕಳ್ಳರು ಚಿನ್ನವನ್ನು ಕಳ್ಳತನಗೈದು ಪರಾರಿಯಾಗಿದ್ದಾರೆ. ಇದು ಒಂದು ದಿನದ ಕೆಲಸ ಅಲ್ಲ. ದಿನಂಪ್ರತಿ ಆ ಪೊಲೀಸನ ಈ ಆಟ ನಡೆಯುತ್ತಿದೆ. ಆ ಪೊಲೀಸ ಅಧಿಕಾರಿಯ ಸಾತ್ನಿಂದ ಇಷ್ಟೆಲ್ಲಾ ಅನಾಹುತ ಆಗುತ್ತಿವೆ. ಅದಕ್ಕಾಗಿ ಆ ಪೊಲೀಸ ಅಧಿಕಾರಿಗೆ ಯಾರು ಯಾರು ಸಾತ್ ನೀಡುತ್ತಿದ್ದಾರೆ ಎಂದು ತನಿಖೆ ಬಳಿಕ ತಿಳಿದು ಬರಬೇಕಿದೆ. ಆ ಕಳ್ಳರು ಯಾರು ಎನ್ನುವುದು ವಿಡಿಯೋ ಸಮೇತ ಮುಂದಿನದ ಭಾಗದಲ್ಲಿ ರಿಲೀಸ್ ಮಾಡಲಾಗುವುದು.