ವಿಜಯಪುರ: ಶಕ್ತಿ ಯೋಜನೆ ಖಂಡಿಸಿ ವಿಜಯಪುರ ನಗರದ ಸಿದ್ಧೇಶ್ವರ ದೇವಸ್ಥಾನದ ಎದುರು ಕರ್ನಾಟಕ ಚಾಲಕರ ಒಕ್ಕೂಟದವರು ಬುಧವಾರ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಶಕ್ತಿ ಯೋಜನೆ ಜಾರಿಗೆ ಹಿನ್ನೆಲೆ ಬಡ ಚಾಲಕರ ಜೀವನ ಬೀದಿಗೆ ಬಂದಿದೆ. ಶಕ್ತಿ ಖಾಸಗಿ ವಾಹನಗಳ ಚಾಲಕರಿಗೆ ದೊಡ್ಡ ಸಮಸ್ಯೆ ಆಗಿದೆ. ಶಕ್ತಿ ಯೋಜನೆಯಿಂದ ಖಾಸಗಿ ವಾಹನಗಳ ಚಾಲಕರಿಗೆ ಜೀವನ ನಡೆಸಲು ಆಗುತ್ತಿಲ್ಲ. ಅದಕ್ಕಾಗಿ ತಕ್ಷಣವೇ ಶಕ್ತಿ ಯೋಜನೆ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.