ವಿಜಯಪುರ: ಕರ್ತವ್ಯ ನಿರತ ಲೋಕಾಯುಕ್ತ ಡಿವೈಎಸ್ಪಿ ಹೃದಯಘಾತದಿಂದ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿದೆ.
ಜಿಲ್ಲಾ ಲೋಕಾಯುಕ್ತದಲ್ಲಿ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದ ಅರುಣ್ ನಾಯಕ್ ನಿಧನರಾಗಿದ್ದಾರೆ. ಬ್ಯಾಡ್ಮಿಂಟನ್ ಆಡುವ ವೇಳೆ ಅಸ್ಚಸ್ಥರಾದ ಅರುಣ ನಾಯಕನ್ನು ಕೂಡಲೇ ಸ್ಥಳಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದ್ರೇ, ಚಿಕಿತ್ಸೆ ಫಲಕಾರಿಯಾಗದೇ ಅರುಣ ನಾಯಕ್ ಸಾವನ್ನಪ್ಪಿದ್ದಾರೆ. ಪತ್ನಿ, ಓರ್ವ ಪುತ್ರನ ಸೇರಿದಂತೆ ಅಪಾರ ಬಂಧುಗಳನ್ನು ಅರುಣ ನಾಯಕ್ ಅಗಲಿದ್ದಾರೆ.