ಕಲಬುರಗಿ: ತೊಗರಿ ನಾಡು ಖ್ಯಾತಿಯ ಕಲಬುರಗಿಯಲ್ಲಿ ಕೆನರಾ ಬ್ಯಾಂಕ್ ಎಟಿಎಮ್ ಒಡೆದು ಹಣ ಕಳ್ಳತನಗೈದು ಕಳ್ಳರು ಪರಾರಿಯಾಗಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್ ಎಟಿಎಂನ್ನು ನಸುಕಿನ ಜಾವ ನಾಲ್ಕು ಗಂಟೆಗೆ ನಾಲ್ವರು ದುಷ್ಕರ್ಮಿಗಳಿಂದ ಕೃತ್ಯ ಎಸಗಿದ್ದಾರೆ. ಬುಲೇರೋ ವಾಹನದಲ್ಲಿ ಬಂದ ದುಷ್ಕರ್ಮಿಗಳು ಎಟಿಎಂ ಒಡೆದು ಸುಮಾರು 13 ಲಕ್ಷ ಕಳ್ಳತನ ಮಾಡಿಕೊಂಡಿ ಪರಾರಿಯಾಗಿದ್ದಾರೆ. ಅಲ್ಲದೇ, ಎಟಿಎಂ ಹೊರ ಭಾಗದಲ್ಲಿದ್ದ ಸಿಸಿಟಿವಿಗೆ ಮಂಜು ಕವಿಯೋ ಹಾಗೆ ಸ್ಪ್ರೇ ಮಾಡಿದ್ದಾರೆ.
ಗ್ಯಾಸ್ ಕಟರ್ ನಿಂದ ಶೇಟರ್ ಮುರಿದು ಒಳನುಗ್ಗಿ ಈ ಕೃತ್ಯ ಮಾಡಿದ್ದಾರೆ. ಅಫಜಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.