ವಿಜಯಪುರ: ಭಾರತ ಬೆಂಜ್ ಟ್ರಕ್ ಬೈಕ್ಗೆ ಡಿಕ್ಕಿಯಾಗಿರುವ ಪರಿಣಾಮ ಬೈಕ್ ಸವಾರನ ಕಾಲು ಕಟ್ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ಬಸ್ ನಿಲ್ದಾಣದ ಎದುರುಗಡೆ ನಡೆದಿದೆ. ಪಟ್ಟಣದ ನಿವಾಸಿ, ಶಿಕ್ಷಕ ದೇಸಾಯಿ ಅವರ ಮೇಲೆ ಟ್ರಕ್ ಹರಿದೆ. ಅಲ್ಲದೇ, ಘಟನೆಯಿಂದ ಭಾರತ ಬೆಂಚ್ ವಾಹನ ಚಾಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಚಾಲಕನನ್ನು ಸ್ಥಳೀಯರು ಹಿಡಿದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.