ವಿಜಯಪುರ: ಕಾಂಗ್ರೆಸ್ ಸರ್ಕಾರ ಕೆಡವಲು 60 ಶಾಸಕರು ಬೇಕಾಗುತ್ತದೆ ಎಂದು ಸಚಿವ ಎಂಬಿ ಪಾಟೀಲ ಹೇಳಿದರು. ವಿಜಯಪುರ ತಾಲ್ಲೂಕಿನ ಕನ್ನೂರ ಗ್ರಾಮದಲ್ಲಿ ಮಾತನಾಡಿದ ಅವರು, ಸರ್ಕಾರ ಬೀಳಿಸಲು ಯತ್ನ ನಡೆದಿದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಅದು ಹಾಗೆಲ್ಲ ಆಗೋದಿಲ್ಲ, ನಾವು 136 ಶಾಸಕರು ಒಟ್ಟಿಗೆ ಇದ್ದೇವೆ. ಈ ಸರ್ಕಾರ ಕೆಡವಲು 60 ಶಾಸಕರು ಬೇಕಾಗುತ್ತದೆ. ಒಬ್ಬರೇ ಒಬ್ಬರು ಶಾಸಕರು ಕೂಡ ಹೋಗಲ್ಲ. ಸರ್ಕಾರ ಕೆಡುವುದು ಹಗಲು ಕನಸು ಎಂದರು. ಇನ್ನೂ ಇದು ನಮ್ಮ ರಾಜ್ಯದಲ್ಲಿ ಸಾಧ್ಯವಿಲ್ಲ. ಈ ಸರ್ಕಾರ ಸಂಪೂರ್ಣ 5 ವರ್ಷ ಇರುತ್ತದೆ. ಮತ್ತೆ 5 ವರ್ಷದ ಬಳಿಕ ಅಧಿಕಾರಕ್ಕೆ ಬರುತ್ತೇವೆ ಎಂದರು.