ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಮೊಹರಂ ಸಂಭ್ರಮದಿಂದ ಆಚರಿಸಲಾಯಿತು. ಮೊಹರಂ ನಿಮಿತ್ಯ ಹಾಕಿದ ಕೆಂಡದಲ್ಲಿ ಕಂಬಳಿ ಹಾಸಿ ಭಕ್ತ ಕುಳಿತುಕೊಂಡಿದ್ದಾನೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಅಮರಗೋಳ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಹೌದು…! ಅಲಾಯಿ ದೇವರ ಎದುರುಗೆ ಹಾಕಿದ ನಿಗಿನಿಗಿ ಕೆಂಡದ ಮೇಲೆ ಕಂಬಳಿ ಹಾಸಿ ಯಲ್ಲಾಲಿಂಗ ಹಿರೇಹಾಳ ಕುಳಿತುಕೊಂಡು ಭಕ್ತಿ ತೋರಿಸಿದ್ದಾನೆ. ಕೆಲ ಕ್ಷಣ ಕೆಂಡದ ಮೇಲೆ ಕಂಬಳಿ ಹಾಸಿ ಕುಳಿತು ಭಕ್ತಿ ಸಮರ್ಪನೆ ಮಾಡಿದ್ದಾನೆ. ಬಳಿಕ ಬರಿಗೈಯ್ಯಲ್ಲಿ ಕೆಂಡ ತುಂಬಿ ಕೆಂಡದಾರತಿ ಯಲ್ಲಾಲಿಂಗ ಮಾಡಿದ್ದಾನೆ. ಆದ್ರೇ, ಯಲ್ಲಾಲಿಂಗನ ಭಕ್ತಿ ಪಾರಾಕಾಷ್ಟೆಗೆ ಗ್ರಾಮಸ್ಥರು ಆಶ್ಚರ್ಯ ವ್ಯಕ್ತಪಡಿಸಿದರು. ಬೆಂಕಿ ಮೇಲೆ ಕುಳಿತರೂ ಕೈಯ್ಯಿಂದ ಬೆಂಕಿ ತುಂಬಿದರೂ ಯಲ್ಲಾಲಿಂಗನಿಗೆ ಯಾವುದೇ ಸುಟ್ಟ ಗಾಯವಾಗಿಲ್ಲ. ಇದು ಅಲಾಯಿ ದೇವರ ಪವಾಡವೆಂದು ಜನರ ನಂಬುತ್ತಿದ್ದಾರೆ.