ಬಾಗಲಕೋಟ: ಕೇಸರಿ ವಸ್ತ್ರ ಹಿಡಿದು ಲಾಲಸಾಬ್ ಅಜ್ಜನವರು ರಾಜಕೀಯದ ಭವಿಷ್ಯ ನುಡಿದಿದ್ದಾರೆ. ಇದೀಗ್ ಅಜ್ಜನ ಭವಿಷ್ಯ ವಾಣಿ ಫುಲ್ ವೈರಲ್ ಆಗುತ್ತಿದೆ. ಬಾಗಲಕೋಟೆ ಜಿಲ್ಲೆಯ ಹೆಬ್ಬಳ್ಳಿ ಗ್ರಾಮದ ಲಾಲಸಾಬವಲಿ ದರ್ಗಾದಲ್ಲಿ ಪ್ರತಿವರ್ಷ ಭವಿಷ್ಯ ನುಡಿಯಲಾಗುತ್ತದೆ. ಕೇಸರಿ ವಸ್ತ್ರ ಕೈಯಲ್ಲಿ ಹಿಡಿದು ಇದರ ಸಲುವಾಗಿ ಜನ ಬಹಳ ಬಡಿದಾಡುತ್ತಿದ್ದಾರೆ, ಹೆಣಗಳು ಬೀಳುತ್ತಿವೆ. ಆದರೆ ಬರೆದಿಟ್ಟುಕೊಳ್ಳಿ ಖುರ್ಚಿ ಮಾತ್ರ ಗಟ್ಟಿ ಪಾ ಎಂದ ಲಾಲಸಾಬ್ ಅಜ್ಜನವರು. ಅಜ್ಜನ ಹೇಳಿಕೆಯಿಂದ ಮತ್ತೇ ಕೇಂದ್ರದಲ್ಲಿ ಬಿಜೆಪಿಗೆ ಅಧಿಕಾರ ಫಿಕ್ಸ್ ಎಂದು ಜನತೆ ವಿಶ್ಲೇಷಿಸುತ್ತಿದ್ದಾರೆ.