ವಿಜಯಪುರ: ಅಕ್ರಮವಾಗಿ ಜಮೀನಿನಲ್ಲಿ ಗಾಂಜಾ(Ganja) ಬೆಳೆದಿರುವ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ(Vijayapur) ತಾಲ್ಲೂಕಿನ ದ್ಯಾಬೇರಿ ಗ್ರಾಮದಲ್ಲಿ ನಡೆದಿದೆ. ವಿಠ್ಠಲ ತೆಲಗಿ ಬಂಧಿತ ಆರೋಪಿ. ಅಕ್ರಮವಾಗಿ ಜಮೀನಿನಲ್ಲಿ ಬೆಳೆದಿದ್ದ 1,49,500 ಮೌಲ್ಯದ 21 ಕೆಜಿ(Kg) 353 ಗ್ರಾಂ ಹಸಿ ಗಾಂಜಾ ಜಪ್ತಿಗೈದಿದ್ದಾರೆ. ಅಲ್ಲದೇ, ಆರೋಪಿ ವಿರುದ್ಧ ಕೇಸ್ ದಾಖಲಾಗಿದೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ(Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.