ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ಕೈಯಲ್ಲಿ ಮಚ್ಚು ಹಿಡಿದುಕೊಂಡು ಇಬ್ಬರಿಗೆ ಧಮ್ಕಿ ಹಾಕಿರುವ ಘಟನೆ ವಿಜಯಪುರದ ಗ್ಯಾಂಗ್ ಬಾವಡಿಯಲ್ಲಿ ನಡೆದಿದೆ. ದಯಾನಂದ ಬನಸೋಡೆ ಧಮ್ಕಿ ಹಾಕಿರುವ ವ್ಯಕ್ತಿ. ಇನ್ನೂ ಆನಂದ ಔದಿ ಹಾಗೂ ಕುಟುಂಬಸ್ಥರಿಗೆ ದಯಾನಂದ ಕೈಯಲ್ಲಿ ಧಮ್ಕಿ ಹಾಕಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ದಯಾನಂದ ಬನಸೋಡೆ ಹಾಗೂ ಲಕ್ಷ್ಮಿ ಬನಸೋಡೆ ವಿರುದ್ಧ ಕೇಸ್ ದಾಖಲು ಆಗಿದೆ. ಈ ಕುರಿತು ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.