ಹುಬ್ಬಳ್ಳಿ: ಮುಂದಿನ ಗಾಲಿಯ ಟೈಯರ್ ಬ್ಲಾಸ್ಟ್ ಆಗಿ ಅಕ್ಕಿ(Rice) ಲಾರಿಯೊಂದು(Lorry) ಪಲ್ಟಿಯಾದ ಘಟನೆ ಹುಬ್ಬಳ್ಳಿಯ ಕುಂದಗೋಳ ರಿಂಗ್ ರೋಡ್ನಲ್ಲಿ ನಡೆದಿದೆ. ಅಕ್ಕಿ ಪಾಕೆಟ್ ಹೊತ್ತು ದಾವಣಗೆರೆಯಿಂದ ಅಹ್ಮದಾಬಾದ್ಗೆ ಹೋಗುತ್ತಿದ್ದ ಲಾರಿಯ ಮುಂದಿನ ಗಾಲಿಯ ಟೈಯರ್ ಏಕಾಏಕಿ ಬ್ಲಾಸ್ಟ್(Blast) ಆಗಿದೆ. ಪರಿಣಾಮ ಲಾರಿ ನೆಲಕ್ಕೂರುಳಿದೆ. ಅದೃಷ್ಟವಶಾತ್ ಲಾರಿ ಚಾಲಕ ಮತ್ತು ನಿರ್ವಾಹಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.