ವಿಜಯಪುರ: 6 ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಬೀಳುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಸರ್ಕಾರ ಬೀಳುವ ವರೆಗೂ ಸಮಾಧಾನದಿಂದ ಇರಬೇಕು. ಕಾಂಗ್ರೆಸ್ ಶಾಸಕರಿಗೆ ಅನುದಾನ ಇಲ್ಲ. ಕಾಂಗ್ರೆಸ್ ಶಾಸಕರೇ ಅಳುತ್ತಿದ್ದಾರೆ. ಅದಕ್ಕೆ ನೀವು ಕೆಲದಿನಗಳು ರೆಸ್ಟ್ ಮಾಡಿ, 6-7 ತಿಂಗಳು ಕಷ್ಟ ಇದೆ. ನಂತರ ನಮ್ಮ ಸರಕಾರ ಬರುತ್ತದೆ. ಮತ್ತೆ ಅನುದಾನ ಸಿಗುತ್ತದೆ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದ್ದರು.