ವಿಜಯಪುರ: ಗೃಹ ಲಕ್ಷ್ಮಿ ಯೋಜನೆ ಫಲಾನುಭವಿ ಹೆಸರು ನೋಂದಣಿಗೆ ಹಣ ವಸೂಲಿ ಮಾಡಿರುವ ಆರೋಪ ವಿಜಯಪುರ ನಗರದ ಆಶ್ರಮ ರಸ್ತೆಯ ಕರ್ನಾಟಕ ಒನ್ ಸೆಂಟರ್ ನಲ್ಲಿ ಕೇಳಿ ಬಂದಿದೆ. ಫಲಾನುಭವಿಗಳಿಂದ ಫೋನ್ ಪೇ ಮೂಲಕ ಸೆಂಟರ್ನ ಮಹೆಬೂಬ್ ಗೊಟಗುಣಕಿ ಹಣ ವಸೂಲಿ ಮಾಡಿದ್ದಾರೆ. ಈರಮ್ಮ ಮೇಟಿ ಎಂಬುವರಿಂದ ಹಣ ವಸೂಲಿ ಮಾಡಿದ್ದಾರೆ. ಫೋನ್ ಪೇ ಹಾಕಿಸಿಕೊಂಡಿದ್ದ ಸ್ಕ್ರೀನ್ ಶಾಟ್ ಲಭ್ಯವಾಗಿದೆ. ಸರ್ಕಾರದಿಂದ ಕೊಡುವ ಹಣ ಬಾಡಿಗೆಗೆ ಸಾಕುವುದಿಲ್ಲ ಎಂದು ಮಹೆಬೂಬ್ ಹೇಳಿದ್ದಾನೆ.