ವಿಜಯಪುರ/Vijaypur: ಅಕ್ರಮವಾಗಿ ಗಾಂಜಾ(Ganja) ಮಾರಾಟದ ವೇಳೆ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಎಪಿಎಂಸಿ ಬಳಿ ನಡೆದಿದೆ. ಯಂಕಪ್ಪ ಗೊಲ್ಲರ ವಿರುದ್ಧ ಕೇಸ್ ದಾಖಲಾಗಿದೆ. ಅಲ್ಲದೇ, ಎಪಿಎಂಸಿ ಬಳಿ ಗಾಂಜಾ ಮಾರಾಟದ ವೇಳೆ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದು 910 ಗ್ರಾಂ ಗಾಂಜಾ ಜಪ್ತಿಗೈದಿದ್ದಾರೆ. ಈ ಕುರಿತು ಸಿಂದಗಿ(Sindagi) ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.