ಬೆಳಗಾವಿ/ಸವದತ್ತಿ: ತಾಲೂಕಿನ ಗೊರವನಕೊಳ್ಳ-ವಟ್ನಾಳ ಗ್ರಾಮಗಳ ಹತ್ತಿರವಿರುವಂತಹ ಮಲಪ್ರಭಾ ನದಿಯ ಹಿನ್ನೀರಿನಲ್ಲಿ ಮಹಿಳೆಯ ಶವವೊಂದ ಪತ್ತೆಯಾಗಿದೆ. ಮೃತರು ಧಾರವಾಡ ನಗರದ ಸಪ್ತಾಪೂರಬಾವಿಯ ನಿವಾಸಿ ಪ್ರೀಯದರ್ಶಿನಿ ಲಿಂಗರಾಜ ಪಾಟೀಲ (45) ಎಂದು ತಿಳಿದುಬಂದಿದೆ. ಕಳೆದ ಎರಡು ಹಿಂದಷ್ಟೇ ಭಾರತಕ್ಕೆ ಮಹಿಳೆ ಮರಳಿ ಬಂದಿದ್ದಳು. ತಮ್ಮ ಮಗನ ಅನಾರೋಗ್ಯದ ಕಾರಣ ಮನನೊಂದು ಮಹಿಳೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಲಪ್ರಭಾ ಈ ನೀರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.