ವಿಜಯಪುರ/Vijaypur: ಸಾಲಬಾದೆ ತಾಳಲಾರದೆ ಮನನೊಂದು ರೈತನೋರ್ವ(Farmer) ವಿಷ(Poison) ಕುಡಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅರ್ಜನಾಳ ಗ್ರಾಮದಲ್ಲಿ ನಡೆದಿದೆ. ಅಶೋಕ ಜೆಟ್ಟೆಪ್ಪ ಶಿಗಣಾಪುರ 52 ಮೃತಪಟ್ಟಿರುವ ದುರ್ದೈವಿ. ಹಲಸಂಗಿ ಯೂನಿಯನ್ ಬ್ಯಾಂಕ್ನಲ್ಲಿ 2, ಅರ್ಜನಾಳ ಗ್ರಾಮದ ಪಿಕೆಪಿಎಸ್ ಬ್ಯಾಂಕ್(Bank) 65 ಸಾವಿರ, ಊರ ಮನಿಸಾಲ 5 ಲಕ್ಷ ಸೇರಿದಂತೆ ಬಡ್ಡಿ ಸೇರಿ ಒಟ್ಟು 15 ಲಕ್ಷ 65 ಸಾವಿರ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಅದಕ್ಕಾಗಿ ಮನನೊಂದ ವಿಷ ಸೇವಿಸಿ ಅಸುನೀಗಿದ್ದಾರೆ. ಝಳಕಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.