ವಿಜಯಪುರ: ಆಲಮಟ್ಟಿಯಲ್ಲಿ ರೈತ ಮುಖಂಡರನ್ನು ಹೊರಗಿಟ್ಟು ಯುಕೆಪಿ ಯೋಜನೆ ಐಸಿಸಿ ಸಭೆ ಹಿನ್ನೆಲೆ ರೈತರಿಗೆ ಏಯ್ ನಡಿ ಎಂದು ಏಕವಚನದಲ್ಲೇ ಸಚಿವ ಆರ್ ಬಿ ತಿಮ್ಮಾಪುರ ದರ್ಪ ತೋರಿಸಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ನಡೆದಿದೆ. ಸಚಿವ ಆರ್ ಬಿ ತಿಮ್ಮಾಪುರ ಅವ್ರೇ ರೈತರೊಂದಿಗೆ ಹೀಗೆ ನಡೆದುಕೊಳ್ಳೋದಾ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸಭೆ ಮುಗಿಸಿ ಹೊರಗೆ ಬಂದ ಸಚಿವ ಆರ್ ಬಿ ತಿಮ್ಮಾಪುರ ಅವರನ್ನು ರೈತ ಮುಖಂಡ ವಾಸುದೇವ ಮೇಟಿ ನಮ್ಮನ್ನು ಹೊರಗಡೆಗೆ ಯಾಕೆ ಇಟ್ಟಿದ್ರೀ ಎಂದು ಪ್ರಶ್ನಿಸಿದ್ದಾರೆ. ಸರ್ ಒಂದು ನಿಮಿಷ ಮಾತಾಡ್ಬೇಕು ಎಂದು ವಾಸುದೇವ ಹೇಳಿದ್ದಾರೆ. ಈ ವೇಳೆ ಏಯ್ ನಡಿ ಎಂದು ಸಚಿವ ಆರ್ ಬಿ ತಿಮ್ಮಾಪುರ ಹೇಳಿದ್ದಾರೆ. ಅದಕ್ಕೆ ಮೇಟಿ ಇಲ್ಲಾಂದ್ರೆ ನಾನು ಮುಖ್ಯಮಂತ್ರಿ ಬಳಿ ಹೋಗ್ತೀನಿ, ನಾನು ರಾಜ್ಯಾಧ್ಯಕ್ಷ ಇದ್ದೇನೆ ಎಂದಿದ್ದಾರೆ. ಮುಂದಿನ ಮೀಟಿಂಗ್ ನಲ್ಲಿ ನಿಮ್ಮ ಸಲಹೆ ಪರಿಗಣಿಸೋಣ ಎಂದು ಹೇಳಿ ತೆರಳಿದ ಸಚಿವ ತಿಮ್ಮಾಪುರ ಕಾಲ್ಕಿತ್ತಿದ್ದಾರೆ.