ರಾಯಚೂರು: ಸರ್ಕಾರದ ವಿರುದ್ಧ ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ನಡೆದಿದೆ. ಮೃತನನ್ನು ಚಿಕ್ಕ ಬೂದೂರಿನ ಯುವಕ ಚನ್ನಬಸವ (25) ಎಂದು ಗುರುತಿಸಲಾಗಿದೆ. ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಲ್ಲದೇ, 6-8ನೇ ತರಗತಿ ಶಿಕ್ಷಕರ ಹುದ್ದೆಗೆ ಮೃತ ಚನ್ನಬಸವ ಆಯ್ಕೆಯಾಗಿದ್ದ, 2022ರಲ್ಲಿ ನೇಮಕಾತಿ ಲಿಸ್ಟ್ ಆತನ ಹೆಸರು ಸಹ ಇತ್ತು. ಆದರೆ ಕೊನೆ ಕ್ಷಣದ ಲಿಸ್ಟ್ನಲ್ಲಿ ಹೆಸರು ಇರಲಿಲ್ಲ. ಬಳಿಕ ಮತ್ತೊಂದು ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದರೂ ಅದರಲ್ಲಿ ನಪಾಸ ಆಗಿದ್ದಾನೆ. ಅದಕ್ಕಾಗಿ ಮನನೊಂದ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಎನ್ನಲಾಗಿದೆ. ದೇವದುರ್ಗ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.