ವಿಜಯಪುರ: ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಬಸವೇಶ್ವರ ಸರ್ಕಲ್ ನಲ್ಲಿ ನಡೆದಿದೆ.
ಅಬ್ದುಲ್ ಮುಜಾವರ್, ಹಣಮಂತರಾಯ್ ಬಂಟನೂರ್, ಸಲೀಮ್ ಮೋಮಿನ್ ಬಂಧಿತ ಆರೋಪಿಗಳು. ಇನ್ನು ಆರೋಪಿಗಳು ಸಿಂದಗಿಯಲ್ಲಿ 8, ವಿಜಯಪುರ 2, ದೇವರಹಿಪ್ಪರಗಿ 2, ಇಂಡಿ 2, ಅಫಜಲಪುರ1, ಕಲಕೇರಿ 1 ಸೇರಿದಂತೆ 8.50 ಲಕ್ಷ ಮೌಲ್ಯದ 16 ಬೈಕ್ಗಳನ್ನು ಜಪ್ತಿಗೈದಿದ್ದಾರೆ. ಈ ಕುರಿತು ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.