ವಿಜಯಪುರ: ಬ್ಯಾಂಕ್ ಅಕೌಂಟ್ ಕ್ಲೋಸ್ ಆಗಿದೆ ಎಂದು ನಂಬಿಸಿ ವ್ಯಕ್ತಿಗೆ ಸಾವಿರಾರು ನಗದು ವಂಚನೆ ಮಾಡಿರುವ ಘಟನೆ ವಿಜಯಪುರ ನಗರದ ಜಾಡರ ಓಣಿಯಲ್ಲಿ ನಡೆದಿದೆ. ಬಸಯ್ಯ ವಿಭೂಯಿಮಠ ಮೋಸ ಹೋದವರು. ಇನ್ನು ಬ್ಯಾಂಕ್ ಅಕೌಂಟ್ ಕ್ಲೋಸ್ ಆಗಿದೆ ಎಂದು ಕರೆ ಮೂಲಕ ತಿಳಿಸಿದ್ದಾರೆ. ಇದನ್ನು ನಂಬಿ ಓಟಿಪಿ ನೀಡಿದ್ದಾರೆ. ತಕ್ಷಣವೇ ಅಕೌಂಟ್ ನಲ್ಲಿದ 75 ಸಾವಿರಕ್ಕೂ ಹೆಚ್ಚಿನ ಹಣ ಕಟ್ ಆಗಿದೆ. ಅದಕ್ಕಾಗಿ ನಮಗೆ ನ್ಯಾಯ ಒದಗಿಸುವಂತೆ ಬಸಯ್ಯ ಮನವಿ ಮಾಡಿದ್ದಾರೆ.