ವಿಜಯಪುರ: ಬ್ಯಾಂಕ್ ಸಿಡಿಎಂ ಮಶೀನ್ನಲ್ಲಿ ಅಪರಿಚಿತ ವ್ಯಕ್ತಿಯಿಂದ ಹಣ ಜಮಾ ಮಾಡುವ ಮುನ್ನ ಹುಷಾರು..ವಿಜಯಪುರದ ಆಹೇರಿ ನಿವಾಸಿ ಬಸಪ್ಪ ಉಕ್ಕಲಿ ಮೋಸ ಹೋದವರು. ಹೌದು..! ವಿಜಯಪುರ ನಗರದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಎಸ್ಬಿಐ ಬ್ಯಾಂಕ್ನಲ್ಲಿ ಸಿಡಿಎಂ ಮಶೀನ್ನಲ್ಲಿ ಉಕ್ಕಲಿ ಅವರಿಗೆ ಹಣ ಜಮಾ ಮಾಡಲು ಬರದ ಕಾರಣ ಅಪರಿಚಿತನಿಗೆ ಹಣ, ಎಟಿಎಂ ಹಾಗೂ ಪಾಸ್ವರ್ಡ್ ನೀಡಿ ಹಣ ಜಮಾ ಮಾಡಲು ತಿಳಿಸಿದ್ದಾರೆ. ಇನ್ನು ಅಪರಿಚಿತ ಹಣ, ಎಟಿಎಂ ಪಡೆದುಕೊಂಡು 25 ಸಾವಿರ ಹಣ ಮಶೀನ್ನಲ್ಲಿ ಹಣ ಜಮಾ ಮಾಡಿದ್ದಾನೆ. ಒಟ್ಟು ಬ್ಯಾಂಕ್ ಅಕೌಂಟ್ನಲ್ಲಿ 84,752 ಹಣ ಇದೆ. ಆದ್ರೇ, ಬಸಪ್ಪ ಉಕ್ಕಲಿ ಅವರಿಗೆ ಮರಳಿ ಎಟಿಎಂ ನೀಡುವಾಗ ನಕಲಿ ಎಟಿಎಂ ನೀಡಿದ್ದಾನೆ. ಎರಡು ದಿನದ ಬಳಿಕ Phone Pay ಮೂಲಕ ಬ್ಯಾಲೆನ್ಸ್ ಚೆಕ್ ಮಾಡಿದಾಗ ಕೇವಲ 752 ಮಾತ್ರ ಹಣ ಇದೆ. ಅದಕ್ಕಾಗಿ ಈ ಕುರಿತು ಉಕ್ಕಲಿ ದೂರು ನೀಡಿದ್ದಾನೆ. ಈ ಕುರಿತು ಗೋಳಗುಮ್ಮಟ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.