ವಿಜಯಪುರ: ವಕ್ಪ್ ಕಾಯಿದೆ ರದ್ದು ಪಡಿಸುವಂತೆ ಒತ್ತಾಯಿಸಿ ಪ್ರಧಾನಮಂತ್ರಿಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪತ್ರ ಬರೆದಿದ್ದಾರೆ. 1995 ವಕ್ಫ್ ಆಕ್ಟ್ ರದ್ದು ಮಾಡುವಂತೆ ಪತ್ರದಲ್ಲಿ ಶಾಸಕ ಯತ್ನಾಳ ಮನವಿ ಮಾಡಿದ್ದಾರೆ. ಅಲ್ಲದೇ, ವಕ್ಫ್ ಕಾಯಿದೆ ರದ್ದು ಮಾಡಿದ್ರೆ ಸಾವಿರಾರು ಕೋಟಿ ರೂಪಾಯಿ ಆಸ್ತಿ ಸರ್ಕಾರಕ್ಕೆ ಉಳಿಯಲಿದೆ ಎಂದು ಪತ್ರ ಉಲ್ಲೇಖನ ಮಾಡಿದ್ದಾರೆ. ಯತ್ನಾಳ ಅವರ ಪತ್ರ ಕರ್ನಾಟಕ1ನ್ಯೂಸ್ಗೆ ಲಭ್ಯವಾಗಿದೆ.