ವಿಜಯಪುರ: ನಟ ಪ್ರಕಾಶ ರಾಜ್ ಒಬ್ಬ ಅಯೋಗ್ಯ. ಪ್ರಕಾಶ್ ರಾಜ್ ಅಪ್ಪ-ಅಮ್ಮನಿಗೆ ಹುಟ್ಟಿದ್ದಾನಾ ಅನ್ನೋದಕ್ಕೆ ಗ್ಯಾರಂಟಿ ಏನು? ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಲೇವಡಿ ಮಾಡಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಟ ಪ್ರಕಾಶ ರಾಜ್ ಯಾರಿಗೆ ಹುಟ್ಟಿದ್ದಾನೆ ಎಂದು ತಾಯಿನಾ ಕೇಳಿದ್ದಾನಾ? ತಾಯಿ ಹೇಳಿದಾಗಲೇ ಅಪ್ಪ ಯಾರು ಅಂತ ಗೊತ್ತಾಗಿದೆ ಅಲ್ವಾ ಪ್ರಕಾಶ್ ರಾಜ್ ತಾಯಿಯ ಬಗ್ಗೆ ನನಗೆ ಗೌರವ ಇದೆ ಎಂದರು. ಅಲ್ಲದೇ, ಗೃಹ ಸಚಿವ ಜಿ. ಪರಮೇಶ್ವರ ತಾಕತ್ತು ಇದ್ದರೆ ಮುಸಲ್ಮಾನರ ಹುಟ್ಟಿನ ಬಗ್ಗೆ ಪ್ರಶ್ನಿಸಲಿ. ಮುಸ್ಲಿಂರು ಎಲ್ಲಿ ಹುಟ್ಟಿದ್ರು, ಎಲ್ಲಿಂದ ಬಂದ್ರು ಪ್ರಶ್ನಿಸಲಿ. ಮೈ ಮೇಲೆ ಜ್ಞಾನ ಇಟ್ಟುಕೊಂಡು ಬಾಯಿ ಬಿಡಬೇಕು ಎಂದು ಪರಮೇಶ್ವರ ವಿರುದ್ದ ವಾಗ್ದಾಳಿ ನಡೆಸಿದರು.
ಉದಯ ಸ್ಟ್ಯಾಲಿನ್ ಒಬ್ಬ ಅಯೋಗ್ಯ, ಹುಚ್ಚ. ಉದಯನಿಧಿ ಸ್ಟ್ಯಾಲಿನ್, ಪರಮೇಶ್ವರ್, ಪ್ರಕಾಶ್ ರಾಜ್ ವಿರುದ್ಧ ಈಶ್ವರಪ್ಪ ಹಿಗ್ಗಾಮುಗ್ಗಾ ಕಿಡಿಕಾರಿದರು. ಉದಯನಿಧಿಗು ಸನಾತನ ಧರ್ಮಕ್ಕು ಏನ್ ಸಂಬಂಧ..? ಸ್ಟ್ಯಾಲಿನ್ ಯಾರ್ರಿ?? ಸಾಧು-ಸಂತರ ತಪಸ್ಸಿನಿಂದ ಸನಾತನ ಧರ್ಮವಾಗಿದೆ. ಧರ್ಮವನ್ನ ಮುಟ್ಟಿದವನು ಯಾವನೂ ಉದ್ಧಾರ ಆಗಲ್ಲ. ಸನಾತನ ಧರ್ಮದ ನಾಶ ಅವರಪ್ಪ, ಅಜ್ಜನಿಂದಲು ಆಗಿಲ್ಲ, ಆಗೋದು ಇಲ್ಲ. ಧರ್ಮ ವಿರುದ್ಧ ರಾಕ್ಷಸಿ ಪ್ರವೃತ್ತಿ ತೋರಿಸಿದ್ದಾರೊ ಅವರು ನಾಶವಾಗಿ ಹೋಗ್ತಾರೆ ಎಂದರು.
ಹಿಂದುತ್ವದ ಬಗ್ಗೆ ಶಾಸಕ ಯತ್ನಾಳ 90% ಜೋರದಾರ ಮಾತನಾಡುತ್ತಾರೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ನಿಜವಾದ ಗಂಡು. ಯತ್ನಾಳ ನಮ್ಮ ಲೀಡರ್. ಇದು ನನಗೆ ಖುಷಿ ಇದೆ. ಆದ್ರೇ, 10% ಮಾತ್ರ ಆಚೆ ಈಚೆ ಮಾತನಾಡುತ್ತಾರೆ. ಅದನ್ನು ನಾವು ಸರಿ ಪಡಿಸುತ್ತೇವೆ ಎಂದರು.