ವಿಜಯಪುರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಜಿನ್ನಿಂಗ್ ಪ್ರೆಸ್ಸಿಂಗ್ ಪ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಬಿಳೇಬಾವಿ ಬ್ರದರ್ಸ್ ಕಾಟನ್ ಮರ್ಚಂಟ್ಸ್ಗೆ 48.40 ಲಕ್ಷ ಮೌಲ್ಯದ ವಸ್ತುಗಳು ಸುಟ್ಟು ಕರಕಲಾದ ಘಟನೆ ವಿಜಯಪುರ ನಗರದ ಕೈಗಾರಿಕೆ ವಸಾಹುತು ಪ್ರದೇಶದಲ್ಲಿ ಪಾರಸ್ಮಲ್ ಬೋತ್ರಾ ಅವರ ಲಕ್ಷ್ಮೀ ಕಾಟನ್ ಇಂಡಸ್ಟ್ರೀಜ್ ಜಿನ್ನಿಂಗ್ ಪ್ರೆಸ್ಸಿಂಗ್ ಪ್ಯಾಕ್ಟರಿಯಲ್ಲಿ ನಡೆದಿದೆ. ಬಿಳೇಬಾವಿ ಬ್ರದರ್ಸ್ ಕಾಟನ್ ಮರ್ಚಂಟ್ಸ್ಗೆ ಬೆಂಕಿತಾಗಿದ್ದರಿಂದ ಅದರಲ್ಲಿರುವ ಕಾಟನ್ಗೂ ಬೆಂಕಿತಾಗಿದೆ. ಇದರಿಂದಾಗಿ ಗೋದಾಮಿನಲ್ಲಿದ್ದ ಅಂದಾಜು 29,500 ವೌಲ್ಯದ ಕಾಟನ್ ಬೇಲ್ಗಳು, ಈಶ್ವರಪ್ಪ ಬಸಪ್ಪ ಬಿಳೇಬಾವಿ ಅವರಿಗೆ ಸಂಬಂಧಿಸಿದ 32,500 ರೂ. ಮೌಲ್ಯದ ಕಾಟನ್ ಬೇಲ್ಗಳು, ಹೀಗೆ ಒಟ್ಟು ಇಬ್ಬರಿಗೂ 48.40 ಲಕ್ಷ ರೂ. ವೌಲ್ಯದ ಕಾಟನ್ ಬೇಲ್ಗಳು ಸುಟ್ಟು ಹಾನಿಯಾಗಿದೆ. ಈ ಕುರಿತು ಎಪಿಎಂಸಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.