ವಿಜಯಪುರ: ಬೆಳೆದಿರುವ ದಾಳಿಂಬೆ ಹಣ್ಣುಗಳನ್ನು ಕಳ್ಳರು ಕಳ್ಳತನಗೈದು ಪರಾರಿಯಾಗಿರುವ ಘಟನೆ ವಿಜಯಪುರ ತಾಲ್ಲೂಕಿನ ಜುಮನಾಳ ಗ್ರಾಮದಲ್ಲಿ ನಡೆದಿದೆ. ರೈತ ಮಹಾದೇವ ಎಂಬುವರ ತೋಟದಲ್ಲಿ ಬೆಳೆದಿರುವ ದಾಳಿಂಬೆ ಹಣ್ಣುಗಳು ಕಳ್ಳತನ ಆಗಿದ್ದಾವೆ. ಕಳೆದು ಐದು ತಿಂಗಳ ಹಿಂದೆ ನಾಲ್ಕು ಎಕರೆ ಪ್ರದೇಶದಲ್ಲಿ 6 ಲಕ್ಷ ಖರ್ಚು ಮಾಡಿ ದಾಳಿಂಬೆ ಬೆಳೆದಿದ್ದರು. ಆದ್ರೇ, ತಡರಾತ್ರಿ ತೋಟಕ್ಕೆ ಕನ್ನಹಾಕಿದ ಖದೀಮರು ಸುಮಾರು ಮೂರುವರೆ ಲಕ್ಷ ಮೌಲ್ಯದ ದಾಳಿಂಬೆ ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.