ವಿಜಯಪುರ: ಮರದಲ್ಲಿ ತೊಂಡೆಕಾಯಿ ಹರಿಯಲು ಹೋಗಿ ಮರದ ಪಕ್ಕದಲ್ಲಿರುವ ವಿದ್ಯುತ್ ತಂತಿ ಸ್ಪರ್ಶಿಸಿ ಮರದಿಂದ ಬಿದ್ದು ಬಾಲಕ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಖೈನೂರ ಗ್ರಾಮದಲ್ಲಿ ನಡೆದಿದೆ. ಶಾಂತಪ್ಪ ಗಡಗಿಮನಿ (10) ಮೃತಪಟ್ಟಿರುವ ದುರ್ದೈವಿ. ದನಕಾಯುವ ವೇಳೆ ಮರದಲ್ಲಿ ತೊಂಡೆಕಾಯಿ ಹರಿಯಲು ಮರ ಏರಿದ್ದಾನೆ. ಈ ವೇಳೆ ಮರದ ಪಕ್ಕದಲ್ಲಿರುವ ವಿದ್ಯುತ್ ತಂತಿ ಸ್ಪರ್ಶಿಸಿದೆ. ಇದರಿಂದ ಮರದಿಂದ ಆಯತಪ್ಪಿ ಬಿದ್ದು ಶಾಂತಪ್ಪ ಮೃತಪಟ್ಟಿದ್ದಾನೆ. ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.