ವಿಜಯಪುರ: ನಾನು ಯಾವ ಪಕ್ಷದಲ್ಲಿ ಇಲ್ಲ ಎಂದು ಮಾಜಿ ಸಚಿವ ಎಚ್ ವಿಶ್ವನಾಥ ಹೇಳಿದರು. ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ರಾಜಕೀಯದಲ್ಲಿ ನಿವೃತ್ತಿ ಇಲ್ಲ. ಜೀವನ, ಉಸಿರು ಇರುವ ವರೆಗೂ ರಾಜಕಾರಣದಲ್ಲಿ ಇದ್ದೇ ಇರ್ತೇನೆ ಎಂದರು. ಬಿ.ಕೆ. ಹರಿಪ್ರಸಾದ್ ತಮ್ಮ ವೇದನೆ ಹೇಳಿದ್ದಾರೆ. ಆದ್ರೇ, ವೇದನೆಯನ್ನು ಬಹಿರಂಗವಾಗಿ ಪ್ರದರ್ಶನ ಮಾಡಬಾರದಿತ್ತು. ಈಡಿಗ ಸಮುದಾಯಕ್ಕೆ ಕಾಂಗ್ರೆಸ್ನಲ್ಲಿ ಸಿಕ್ಕ ಅವಕಾಶಗಳು ಬೇರೆಲ್ಲೂ ಸಿಕ್ಕಿಲ್ಲ. ಜೆಡಿಎಸ್ ಯಾರ ಜೊತೆಗೆ ಸೇರಿದು ಲಾಸ್ ಆಗತ್ತದೆ. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುತ್ತದೆ. ಅಲೈನ್ಸ್ ನಿಂದ ಬಿಜೆಪಿ ಲಾಸ್ ಆಗಲಿದೆ. ಜೆಡಿಎಸ್ ಸುಮ್ನೆ ಸೆಕ್ಯೂಲರ್ ಅಂತ ಇಟ್ಟುಕೊಂಡಿರೋದು. ಈಗಲು ಮನೆಗಾಗಿಯೇ ಸೀಟ್ ಹಂಚಿಕೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
ಹಿಂದೆ ದಲಿತ-ಮುಸ್ಲಿಂ ಎರಡು ಟಿಕೇಟ್ ಕೇಳಿದಾಗ ಕೊಡಲಿಲ್ಲ. ಆಗ ಗೆಜ್ಜೆ ಪೂಜೆ, ಈಗ ರಿಯಲ್ ನಾಟಕ ಶುರು. ಈಗಲು ಬಿಜೆಪಿ ಹೈಕಮಾಂಡ್ ಬಳಿ ಮನೆಗೆ ಸೀಟ್ ಕೇಳ್ತಿರೋದು ಎಂದು ಜೆಡಿಎಸ್ ಕುಟುಂಬ ರಾಜಕಾರಣದ ಕುರಿತು ವಿಶ್ವನಾಥ ವಾಗ್ದಾಳಿ ನಡೆಸಿದರು.