ವಿಜಯಪುರ: ಸನಾತನ ಧರ್ಮದ ಬಗ್ಗೆ ಮಾತನಾಡುವವರು ನಾಶವಾಗಿ ಹೋಗುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ಸನಾತನ ಧರ್ಮ ನಾಶ ಮಾಡಬೇಕು ಎನ್ನುವವರು ಕ್ಯಾನ್ಸರ್, ಏಡ್ಸ್ ಇದ್ದ ಹಾಗೆ ಎಂದು ಕಿಡಿಕಾರಿದರು. ಸನತಾನ ಧರ್ಮದ ಪರವಾಗಿ ಆದಿಚುಂಚನಗಿರಿ ಸ್ವಾಮಿ, ಮೂರು ಸಾವಿರ ಮಠದ ಗುರುಗಳು ಮಾತನಾಡಿದ್ದಾರೆ. ಉಳಿದವರು ಮಾತನಾಡಿಲ್ಲ, ಧ್ವನಿ ಎತ್ತಬೇಕು. ಸ್ವಾಮಿಜಿಗಳಲ್ಲಿ ಕೆಲವರು ಕಪಟರು ಇದ್ದಾರೆ. ಹಿಂದೂ ಧರ್ಮದ ಬಗ್ಗೆ ಎಲ್ಲ ಸ್ವಾಮೀಜಿಗಳು ಧ್ವನಿ ಎತ್ತಬೇಕು. ಡಿಸಿಎಂ ಡಿಕೆ ಶಿವಕುಮಾರ್ಗೆ ಧಮ್ ಇದ್ರೇ,
ಬಿ ಕೆ ಹರಿಪ್ರಸಾದ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಲೇವಡಿ ಮಾಡಿದರು. ಇನ್ನು ಬಿ ಕೆ ಹರಿಪ್ರಸಾದ ಕಾಂಗ್ರೆಸ್ನ ಹಿರಿಯ ನಾಯಕರು. ಅವರನ್ನ ಧಮ್ಮ ಇದ್ರೆ, ತಾಕತ್ ಇದ್ರೆ ಡಿಕೆಶಿ ಉಚ್ಚಾಟನೆ ಮಾಡಲಿ ಎಂದು ಸವಾಲ್ ಹಾಕಿದರು. ನನಗೆ ಡಿಕೆಶಿ ಮಾತನಾಡಿದ್ದರು. ಈಗ ಕ್ರಮಕೈಗೊಳ್ಳಲಿ ನೀಡೋಣ. ಅದು ಸಾಧ್ಯ ಆಗಲ್ಲ. ಅಲ್ಲದೇ,
ಸಚಿವ ಸುಧಾಕರ ರಾಜೀನಾಮೆ ನೀಡಬೇಕು ಎಂದು ವಿರುದ್ಧ ಶಾಸಕ ಯತ್ನಾಳ ವಾಗ್ದಾಳಿ ನಡೆಸಿದರು. ಜಾತಿ ನಿಂದನೆ ಹಾಗೂ ದೌರ್ಜನ್ಯ ಪ್ರಕರಣದಲ್ಲಿ
ತಕ್ಷಣವೇ ಸಚಿವ ಸುಧಾಕರ ರಾಜೀನಾಮೆ ನೀಡಬೇಕು. ಇಲ್ಲದೇ ಹೋದ್ರೇ ಸಿಎಂ ಸಿದ್ದರಾಮಯ್ಯ ಅವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.