ವಿಜಯಪುರ: ಬಿಜೆಪಿ ಮುಳುಗಿದ ಹಡಗು ಎಂದು ಬಿಜೆಪಿ ವಿರುದ್ಧ ವಿಜಯಪುರ ನಗರದಲ್ಲಿ ಸಚಿವ ಎಂಬಿ ಪಾಟೀಲ ಹೇಳಿದರು. ಬಿಜೆಪಿ ಮುಳುಗಿ ಹೋಗಿದೆ. ಅಲ್ಲದೇ, ಹಿಂದೂ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಬಗ್ಗೆ ಗೊತ್ತಿಲ್ಲ. ಆದ್ರೇ, ಇಂತಹ ಎಲ್ಲವೂ ಮೇಲೆ ಬರುತ್ತವೆ. ಅದಕ್ಕಾಗಿ ಚೇತರಿಸಿಕೊಳ್ಳುವುದಿಲ್ಲ. ಇನ್ನೂ ಕರ್ನಾಟಕ ಬಿಜೆಪಿಯನ್ನು ವೈಂಡ್ ಅಪ್ ಮಾಡುವ ಪರಿಸ್ಥಿತಿ ಬರುತ್ತದೆ ಎಂದು ಲೇವಡಿ ಮಾಡಿದರು. ಸಚಿವ ರಾಜಣ್ಣ ಮೂರು ಡಿಸಿಎಂ ಸ್ಥಾನಕ್ಕಾಗಿ ಬೇಡಿಕೆ ಇಟ್ಟ ವಿಚಾರಕ್ಕೆ ಅವರ ಹೇಳಿಕೆ ಬಗ್ಗೆ ಗೊತ್ತಿಲ್ಲ. ಸಚಿವ ರಾಜಣ್ಣ ಬೇಡಿಕೆ ಕುರಿತಂತೆ ನಾನು ಮಾತನಾಡಲ್ಲ. ಅದು ಅವರ ವೈಯಕ್ತಿಕ ವಿಚಾರ ಆಗಿದೆ. ನೀವು ಅವರನ್ನೇ ಕೇಳಿ, ಏನೇ ಇದ್ದರು ಅದನ್ನು ಹೈಕಮಾಂಡ್ ತೀರ್ಮಾನ ಮಾಡ್ತಾರೆ. ಹೈಕಮಾಂಡ್ ಅಭಿಪ್ರಾಯ ಕೇಳಿದ್ರೆ ನನ್ನ ಅಭಿಪ್ರಾಯ ಹೇಳುತ್ತೇನೆ. ಧಾರವಾಡ ಬಳಿ ಮತ್ತಯ್ಯ ಮುರುಳಿಧರನ್ ಕೈಗಾರಿಕೆ ಸ್ಥಾಪನೆ ಬಗ್ಗೆ ಅವಶ್ಯ ಬಿದ್ದರೆ ಪರಿಸರವಾದಿ ಸುರೇಶ ಹೆಬ್ಳೀಕರ್ ಜೊತೆಗೆ ಮಾತನಾಡ್ತೇನೆ. ಈ ಕುರಿತು ಪರಿಶೀಲನೆ ಮಾಡಲಾಗುವುದು. ಕೈಗಾರಿಕೆಗೆ ನೀರು ಬೇಕಾಗುತ್ತದೆ. ನೀರು ಹಂಚಿಕೆಯ ವಿಚಾರವು ಇರುತ್ತದೆ. ಇದನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದರು.