ವಿಜಯಪುರ: ಆನ್ಲೈನ್ನಲ್ಲಿ(Online) ಫಂಡ್ಬೇಸ್ಪ್ರೋ.ಕಾಮ್ ಹೆಸರಿನಲ್ಲಿ ಲಕ್ಷಾಂತರ ನಗದು ವಂಚನೆಗೈದಿರುವ ಘಟನೆ ವಿಜಯಪುರ ನಗರದ ಮಹಾವೀರ ಕಾಲೋನಿಯಲ್ಲಿ ನಡೆದಿದೆ. ಬಟ್ಟೆ ವ್ಯಾಪಾರಿ ವಿಶಾಲಕುಮಾರ ಜೈನ್ ಮೋಸ ಹೋದವರು. ಘಟನೆ ವಿವರ: ಆನ್ಲೈನ್ನಲ್ಲಿ(WhatsApp) ಫಂಡ್ಬೇಸ್ಪ್ರೋ 5 ಎಂಬ ಗ್ರುಪ್ನಲ್ಲಿ ಕೆಲವು ಮೇಸಜ್ ಹಾಗೂ ಲಿಂಕ್ಗಳು ಬಂದಿವೆ. ಕೆಲವರು ಹಣ ಹೂಡಿಕೆ ಮಾಡಿ, ಹಣ ಗಳಿಸಿದ್ದಾರೆ ಎನ್ನುವ ಸಂದೇಶಗಳನ್ನು ಹಾಕಿದ್ದಾರೆ. ಇದನ್ನು ನಂಬಿದ ವಿಶಾಲಕುಮಾರ ಈ ಆ್ಯಪ್ ಮೂಲಕ ಮೊದಲಿಗೆ 2000 ಸಾವಿರ ರೂಪಾಯಿಗೆ 2720 ಮರಳಿ ನೀಡಿದ್ದಾರೆ. ಇದನ್ನು ನಂಬಿ ಹಂತ ಹಂತವಾಗಿ ಒಂದು ಲಕ್ಷ, ಎರಡು ಲಕ್ಷ ಹೀಗೆ ಬರೋಬ್ಬರಿ ಜೈನ್ ಅವರು 59,12, 765 ರೂಪಾಯಿ ಹೂಡಿಕೆ ಹೆಸರಿನಲ್ಲಿ ವಂಚನೆ ಮಾಡಿದ್ದಾರೆ. ಅದಕ್ಕಾಗಿ ವಂಚನೆ ಪ್ರಕರಣ ಭೇದಿಸುವಂತೆ ಕೇಸ್ ನೀಡಿದ್ದಾರೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.